ಅಭಿಪ್ರಾಯ / ಸಲಹೆಗಳು

ಕೆಜಿಎಂಎಸ್‌ಡಿಸಿ ನಡೆದು ಬಂದ ದಾರಿ

ಕೆಜಿಎಂಎಸ್‌ಡಿಸಿ ನಡೆದು ಬಂದ ದಾರಿ

 

ಭಾರತದ, ಹಿಂದಿನ ಶೈಕ್ಷಣಿಕ ಹಾಗೂ ತರಬೇತಿ ವ್ಯವಸ್ಥೆಯು ಹೊಸ ತಂತ್ರಜ್ಞಾನದ ನಿರಂತರ ಬೆಳವಣಿಗೆಯ ಹಂತದಲ್ಲಿ ನುರಿತ ಕಾರ್ಮಿಕರನ್ನು ತರಬೇತಿಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ಇಂತಹ ನಿರ್ಣಾಯಕ ವಿಷಯವನ್ನು ಅರ್ಥ ಮಾಡಿಕೊಂಡ ಕರ್ನಾಟಕ ಸರ್ಕಾರವು ಶಿಕ್ಷಣ ಮುಗಿಸಿದ ನಂತರ ನುರಿತ ಕೆಲಸಗಾರನ್ನು ತಯಾರು ಮಾಡಲು ಹಾಗೂ ಶಾಲಾ ನಂತರದ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಆರಂಭಿಸಲು ಯೋಜನೆಯನ್ನು ರೂಪಿಸಿತು. ಜರ್ಮನಿಯ ಸಹಭಾಗಿತ್ವ ವ್ಯವಸ್ಥೆಯು ಕೈಗಾರಿಕೆಗಳ ಗರಿಷ್ಠ ಭಾಗವಹಿಸುವಿಕೆಯನ್ನು ಸಾಧಿಸುವುದರ ಜೊತೆಗೆ ತಾಂತ್ರಿಕ ವರ್ಗದವರ ಹಂತದ ತರಬೇತಿಗೆ ಪರಿಣಾಮಕಾರಿ ಎಂದು ಗುರುತಿಸಲ್ಪಟ್ಟಿತ್ತು. ಹೀಗೆ ಉಗಮವಾದ ಸಂಸ್ಥೆಯೇ : ಕರ್ನಾಟಕ ಜರ್ಮನ್‌ ಬಹು ಕೌಶಲ್ಯಾಭಿವೃದ್ಧಿ ಕೇಂದ್ರ” (ಕೆಜಿಎಂಎಸ್‌ಡಿಸಿ) ಇದು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದಿಂದ ಸ್ವಾಯತ್ತ ಆಡಳಿತ ರಚನೆಯನ್ನು ಹೊಂದಿ ಸ್ಥಾಪಿತವಾಗಿದೆ.

 ಜರ್ಮನ್‌ ಅಂತರರಾಷ್ಟ್ರೀಯ ಸೇವಾ ಕೇಂದ್ರ GIZ InS ದ ತಂತ್ರಜ್ಞಾನದ ಸಹಾಯವನ್ನು ಪಡೆದುಕೊಳ್ಳುತ್ತದೆ. ಈ ಸೊಸೈಟಿಯು ಕರ್ನಾಟಕ ಜರ್ಮನ್‌ ತಂತ್ರಜ್ಞಾನ ತರಬೇತಿ ಸಂ‍ಸ್ಥೆ (ಕೆಜಿಟಿಟಿಐ)ಯನ್ನು ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿ ಪ್ರಾರಂಭಿಸಿದೆ. ಕೆಜಿಟಿಟಿಐನ ಪ್ರಾಥಮಿಕ ಗುರಿ ಬಹುಶಿಸ್ತಿನ ತರಬೇತಿಯ ಕಾರ್ಯಕ್ರಮಗಳನ್ನು ನಡೆಸುವುದಾಗಿದೆ. ಅದು ಬೇರೆ ಬೇರೆ ತಾಂತ್ರಿಕ ವಿಷಯಗಳಲ್ಲಿ ಕೈಗಾರಿಕೆಗಳ ಅವಶ್ಯಕತೆಗಳಿಗೆ ತಕ್ಕಂತೆ ವಿಶೇಷ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುತ್ತದೆ. ಈ ಐದು ಕೆಜಿಟಿಟಿಐ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯ ಸಂಪೂರ್ಣ ವೆಚ್ಚು 250 ಕೋಟಿ ರೂಪಾಯಿಗಳು ಕರ್ನಾಟಕ ಸರ್ಕಾರವು ಜರ್ಮನಿಯ GIZ InS ರ ಜೊತೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಬೇಕಾದ ತಂತ್ರಜ್ಞಾದ ಬೆಳವಣಿಗೆಗೆ ಆರ್ಥಿಕ ಸ್ವಾವಲಂಬಿಗಳಾಗುವಂತೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

 ಕೆಜಿಟಿಟಿಐ ಅವರ ದೀರ್ಘ ಮತ್ತು ಅಲ್ಪಕಾಲೀನ ಕೋರ್ಸ್‌ಗಳ ರಚನೆಗಳು ತಂತ್ರಜ್ಞಾನದ ಉನ್ನತ ಮಟ್ಟದ ವಿಷಯಗಳಾದ ಮ್ಯಾನುಫ್ಯಾಕ್ಚರಿಂಗ್‌, ವೆಲ್ಡಿಂಗ್‌, ಆಟೊಮೆಷನ್‌, ಎಲೆಕ್ಟ್ರಿಕಲ್‌, ಕನ್ಸ್‌ಟ್ರಕ್ಷನ್‌, ಆಟೊಮೊಬೈಲ್‌ ಮತ್ತು ತಂತ್ರಜ್ಞಾನ ಮಾಹಿತಿ ಮುಂತಾದ ವಿಷಯಗಳನ್ನು ಒಳಗೊಂಡಿವೆ. ಇದುವರೆವಿಗೂ ಕೈಗಾರಿಕೆಗಳ ಅರ್ಥ ವ್ಯವಸ್ಥೆಯ ಅವಶ್ಯಕತೆಗಳನ್ನು ಪೂರೈಸಲಾಗದ ಕೊರತೆಯ ಕಡೆ ಗಮನ ಹರಿಸುತ್ತಿದೆ. ಬೆಂಗಳೂರು ಮತ್ತು ಕಲಬುರಗಿಯ ಕೆಜಿಟಿಟಿಐ ಕೇಂದ್ರಗಳಲ್ಲಿ ಪ್ರಸ್ತುತ 2000 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತರಬೇತಿ ಕೊಡುವ ಸಾಮರ್ಥ್ಯವಿದೆ.

 ಈ ಕೇಂದ್ರಗಳು ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳು ಅಧ್ಯಾಪಕರಿಗೆ – ತರಬೇತುದಾರರಿಗೆ ಸಹ ತರಬೇತಿ ನೀಡುತ್ತದೆ. ಮತ್ತು ಆಯಾ ಪ್ರದೇಶಗಳ ತರಬೇತಿ ಸಂಸ್ಥೆಗಳಿಗೆ ಸಾಮಾನ್ಯ ಸೌಲ್ಯಭ್ಯಗಳನ್ನು ಒದಗಿಸುವ ಕೇಂದ್ರಗಳಾಗಿಯೂ ಪಾತ್ರವಹಿಸುತ್ತಿವೆ.

 ಬೆಂಗಳೂರು ಮತ್ತು ಕಲಬುರಗಿ ಕೇಂದ್ರಗಳ ಯಶಸ್ಸಿನ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಸಹ ಕೆಜಿಟಿಟಿಐ ಕೇಂದ್ರಗಳನ್ನು ಸ್ಥಾಪಿಸಿ ಪ್ರಾದೇಶಿಕ ಸಮತೋಲನವನ್ನು ಕಾಪಾಡಲು ನಿರ್ಧರಿಸಲಾಗಿರುತ್ತದೆ.

GIZ InS ಕರ್ನಾಟಕ ಸರ್ಕಾರಕ್ಕೆ ಕೈಗಾರಿಕೆಗಳಲ್ಲಿ ಸಂಪೂರ್ಣವಾಗಿ ನುರಿತ ಸ್ಪರ್ಧಾತ್ಮಕ ಕೆಲಸಗಾರರನ್ನು ತಯಾರಿಸುವ ಗುರುತರ ಕೆಲಸಕ್ಕೆ ಸಂಪೂರ್ಣವಾಗಿ ಸಹಾಯಮಾಡುತ್ತದೆ. ಹಾಗಾಗಿಯೆ ಕರ್ನಾಟಕ ಜರ್ಮನ್‌ ಬಹು ಕೌಶಲ್ಯ ಆಧಾರಿತ  ಕೇಂದ್ರವು ವೃತ್ತಿಪರ ತಾಂತ್ರಿಕ ತರಬೇತಿಗೆ ಒಂದು ಟ್ರೇಡ್‌ ಮಾರ್ಕ್‌ ಆಗಿ ಗುರುತಿಸಲ್ಪಡುತ್ತಿದೆ.

ಇತ್ತೀಚಿನ ನವೀಕರಣ​ : 10-12-2021 12:05 PM ಅನುಮೋದಕರು: Admin


ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜರ್ಮನ್‌ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ (ಕೆಜಿಎಂಎಸ್‌ಡಿಸಿ)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :